ನಮಸ್ಕಾರ,
ತುಂಬಾ ದಿನ ಆಯ್ತು, ಕನ್ನಡದಲ್ಲಿ ಬರೆದು (ಟೈಪಿಸಿ). ಒಂದು ಪ್ರಶ್ನೆ. ಸ್ವಲ್ಪ ಅಧಿಕ ಪ್ರಸಂಗದ್ದು, ಎನ್ಮಾಡ್ಲಿ blog ಹೆಸರೇ “ನಾನು, ನನ್ ಗೀಚಾಟ ಮತ್ತು ನನ್ನ ಅಧಿಕ ಪ್ರಸಂಗ”. ಹೆ ಹೆ ..
ಕನ್ನದ ಸ್ವರಮಾಲೆಯಲ್ಲಿ “ಕ್ಷ” “ತ್ರ” ಮತ್ತು “ಜ್ಞ” ಯಾಕಿದೆ ?
ಇದೊಂದು ಹತ್ತು ಹದ್ನೆಂಟು ವರ್ಶದ ಹಿಂದೆ ಬಾಲಾವಡಿ , ಅಂಗನವಾಡಿ ಅಕ್ಷರಮಾಲೆಯ chart ನೋಡಿದಾಗ ತಲೇಲಿ ಬಂತು. ಆಗ ಸ್ವಲ್ಪ ಸಂಸ್ಕೃತ ಕಲ್ತಿದ್ದೆ… ರಾಮ: ರಾಮೇ ರಾಮೈ .. ಗೊತ್ತಲ್ಲ ಹೈ ಸ್ಕೂಲ್ ಪಾಟಗಳು.
ದೇವನಾಗರಿ ಲಿಪಿಯಲ್ಲಿ, “ಕ್ಷ” “ತ್ರ” ಮತ್ತು “ಜ್ಞ” ಗಳಿಗೆ ಬೇರೆ ಬೇರೆ ಚಿಹ್ನೆಗಳಿವೆ . So.. ಅದರ ಅಕ್ಷರಮಾಲೆಯಲ್ಲಿ specific ಆಗಿ ಬರೆಯದಿದ್ರೆ ಒದುಗರು confuse ಮಾಡಿಕೊಳ್ತಾರೆ ಅಂತ ಅಲ್ಲಿ ಬರೆದಿದ್ದಾರೆ. ಆದ್ರೆ ಕನ್ನಡದಲ್ಲಿ “ಕ್ಷ” “ತ್ರ” ಮತ್ತು “ಜ್ಞ” ಒನ್ದೇ ತರ ಬರೆಯುವುದು ತಾನೇ. “ಕ್ಷ” – ಯಕ್ಷ, ತ್ರ – ನಕ್ಷತ್ರ , ಙ್ – ಯಜ್ಞ ಅಂತ
ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?
ಸಂಪದದಲ್ಲೂ ಇದನ್ನೇ ಪೊಸ್ಟ್ ಮಾಡಿದ್ದೆ, ನೂರು ಜನ ಓದಿದ್ರು ಯಾರೂ ಉತ್ತರ ಮಾತ್ರ ಕೊಟ್ಟಿಲ್ಲ. ಕನ್ನಡ ಅಕ್ಷರ ಮಾಲೆಯಲ್ಲಿ ಈ ಮೂರು ಅಕ್ಷರಗಳನ್ನು ತೆಗೆದು ಹಕಿದ್ದರೇನು ?
Free advertising.: If you recognize this font, please try to reply in the same. Use typepad or quillpad for the typing
Disclaimer: I have not seen Kannada text books from long. If they have removed those symbols from alphabet list, I have no questions to ask. I heard they did for a vowel “Ruu”, which was not getting used at all.
ಕನ್ನಡದಲ್ಲಿ ‘ನಕರಪಿಲ್ಲು'(ವಿಶ್ವಕನ್ನಡ ಆನ್ಲೈನ್ ಪತ್ರಿಕೆಯ ಪವನಜ ಅವರ ಟಿಪ್) ಅನ್ನೋ ಅಕ್ಷರವೊಂದಿದೆ. ‘ನ್’ ಬದಲು ಅದನ್ನು ಬಳಸಬಹುದು. ‘ಬರಹ’ದಲ್ಲಿ ಅದನ್ನೂ ಸೇರಿಸಿದರೆ ಒಳ್ಳೆಯದು ಅಂತ ನನ್ನ ಅನಿಸಿಕೆ.
LikeLike
Veena,
Exactly, I don’t see any logic there.
Neelanjana,
Yes, it is not there in Kannada. But I was skeptic about why it is there in Sanskrit? Same as Veena, I don’t see any logic there.
Sanskrit supposed to be best structured, and study says it is best suited for computer programming. But one thing that looses to English is number of alphabetical members. I just mentioned the same, taking Kannada as Sanskrit’s daughter
Manjunath,
I did not get what a ‘ನಕರಪಿಲ್ಲು’ is. Can you please give me more information, or a link?
LikeLike
nakarapillu inplace of ‘n’, full toss bouncer…!
hegadu ?
LikeLike
ಬಹಳ ದಿನಗಳ ಮೇಲೆ ಈ ಎಳೆಗೆ ಮತ್ತೆ ಉತ್ತರಿಸುತ್ತಿದ್ದೇನೆ :೦
ಸಂಸ್ಕೃತದಲ್ಲಿರುವ ಕ್ಷ, ತ್ರ, ಜ್ಞ ಗಳು, ದೇವನಾಗರಿಯಲ್ಲಿ ಈ ಮೂರು ಒತ್ತಕ್ಷರಗಳನ್ನು ಬರೆಯುವಾಗ, ಮಾಮೂಲಿ ನಿಯಮಗಳಿಗೆ ಅನುಸಾರವಾಗಿ ಬರೆಯದೇ, ಬೇರೆ ರೀತಿ ಬರೆಯುವುದರಿಂದ ಅಷ್ಟೇ. ಕನ್ನಡದಲ್ಲಿ, ಅದು ಅಗತ್ಯವಿಲ್ಲ.
ಇನ್ನು ಋ, ೠ ಬಗ್ಗೆ, ಲೃ (ಇದು ಅಷ್ಟು ಸರಿಯಾದ ಸೂಚನೆ ಅಲ್ಲ, ಆದರೂ, ಇರಲಿ).
ಹಲವು ದ್ರಾವಿಡ ಭಾಷೆಗಳಲ್ಲಿ ಅರ್ಧ ಉಕಾರವೊಂದಿದೆ – ತಮಿಳಲ್ಲಿ ಬರುವ ವಂದು, ಪೋಚು, ಆಚು ಮೊದಲಾದ ಪದಗಳನ್ನು (ಕೇಳಿದ್ದರೆ) ನೆನೆಸಿಕೊಳ್ಳಿ. ಅದು, ಕನ್ನಡದಲ್ಲಿ ಬರುವ ಉಕಾರವಲ್ಲ. ಈಗ ಕೃಷ್ಣ ಎಂಬ ಪದವನ್ನು ನೋಡಿ – ಅದರಲ್ಲಿ ಬರುವುದೂ ಅದೇ (ಅರ್ಧ)ಉಕಾರವೇ – ಅದಕ್ಕೆ ರ ಕಾರ ಸೇರಿದೆ ಅಷ್ಟೇ.
ಆ ರೀತಿಯ ಉಕಾರ (ಹೃಸ್ವ ಮತ್ತು ದೀರ್ಷ ಎರಡೂ), ಸಂಸ್ಕೃತದಲ್ಲಿ ಕೇವಲ ರ, ಮತ್ತು ಲ ಈ ವರ್ಣಗಳಿಗೆ ಮಾತ್ರ ಹತ್ತುತ್ತದೆ. ಅದನ್ನೇ ಹಿಂದಿನಿಂದ ಋ,ೠ, ಲೃ, ಲೄ ಗಳಿಂದ ಸೂಚಿಸುತ್ತಿದ್ದರು. ನಿಜವಾಗಿ, ಆ ಸ್ವರಗಳಿಗೆ, ರ್ ಮತ್ತು ಲ್ ಸೇರಿರುವ ರೂಪವನ್ನೇ ಅವು ತೋರಿಸುತ್ತವೆ. ಕನ್ನಡ ವರ್ಣಮಾಲೆಯಲ್ಲಿ ಋ ಕಾರವನ್ನು ರ ದ ಆಶ್ರಯವಿಲ್ಲದೆ ಉಚ್ಚರಿಸುವುದು ಸಾಧ್ಯ ಪದ್ಧತಿ ಬರಬೇಕಿದೆ. ಆದರೆ, ಕನ್ನಡದಲ್ಲಿ ಬರುವ ಈ ಅರ್ಧ ಉಕಾರವು ಸುಮಾರಾಗಿ ಎಲ್ಲವೂ ಸಂಸ್ಕೃತ ಪದಗಳೇ ಆದ್ದರಿಂದ ಅದರ ಅಗತ್ಯವಿಲ್ಲದಿರಬಹುದು. [ ತಮಿಳಿನಲ್ಲಿರುವ ಪದಾಂತ್ಯದ (ಅರ್ಧ) ಉಕಾರವು = ಋ ಕಾರದ ಸ್ವರ, ಕನ್ನಡದಲ್ಲಿ ಪೂರ್ಣ ಉಕಾರವಾಗಿ ಮಾರ್ಪಟ್ಟಿರುವುದರಿಂದ, ಆ ಸಂದರ್ಭದಲ್ಲಿ ನಾವು ಈ ಸ್ವರವನ್ನು ಬಳಸುವುದೇ ಇಲ್ಲ)
-ನೀಲಾಂಜನ
LikeLike