ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?


ನಮಸ್ಕಾರ,

ತುಂಬಾ ದಿನ ಆಯ್ತು, ಕನ್ನಡದಲ್ಲಿ ಬರೆದು (ಟೈಪಿಸಿ). ಒಂದು ಪ್ರಶ್ನೆ. ಸ್ವಲ್ಪ ಅಧಿಕ ಪ್ರಸಂಗದ್ದು, ಎನ್ಮಾಡ್ಲಿ blog ಹೆಸರೇ “ನಾನು, ನನ್ ಗೀಚಾಟ ಮತ್ತು ನನ್ನ ಅಧಿಕ ಪ್ರಸಂಗ”. ಹೆ ಹೆ ..

ಕನ್ನದ ಸ್ವರಮಾಲೆಯಲ್ಲಿ “ಕ್ಷ” “ತ್ರ” ಮತ್ತು “ಜ್ಞ” ಯಾಕಿದೆ ?

ಇದೊಂದು ಹತ್ತು ಹದ್ನೆಂಟು ವರ್ಶದ ಹಿಂದೆ ಬಾಲಾವಡಿ , ಅಂಗನವಾಡಿ ಅಕ್ಷರಮಾಲೆಯ chart ನೋಡಿದಾಗ ತಲೇಲಿ ಬಂತು. ಆಗ ಸ್ವಲ್ಪ ಸಂಸ್ಕೃತ ಕಲ್ತಿದ್ದೆ… ರಾಮ: ರಾಮೇ ರಾಮೈ .. ಗೊತ್ತಲ್ಲ ಹೈ ಸ್ಕೂಲ್ ಪಾಟಗಳು.

ದೇವನಾಗರಿ ಲಿಪಿಯಲ್ಲಿ, “ಕ್ಷ” “ತ್ರ” ಮತ್ತು “ಜ್ಞ” ಗಳಿಗೆ ಬೇರೆ ಬೇರೆ ಚಿಹ್ನೆಗಳಿವೆ . So.. ಅದರ ಅಕ್ಷರಮಾಲೆಯಲ್ಲಿ specific ಆಗಿ ಬರೆಯದಿದ್ರೆ ಒದುಗರು confuse ಮಾಡಿಕೊಳ್ತಾರೆ ಅಂತ ಅಲ್ಲಿ ಬರೆದಿದ್ದಾರೆ. ಆದ್ರೆ ಕನ್ನಡದಲ್ಲಿ “ಕ್ಷ” “ತ್ರ” ಮತ್ತು “ಜ್ಞ” ಒನ್ದೇ ತರ ಬರೆಯುವುದು ತಾನೇ. “ಕ್ಷ” – ಯಕ್ಷ, ತ್ರ – ನಕ್ಷತ್ರ , ಙ್ – ಯಜ್ಞ ಅಂತ

ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?

ಸಂಪದದಲ್ಲೂ ಇದನ್ನೇ ಪೊಸ್ಟ್ ಮಾಡಿದ್ದೆ, ನೂರು ಜನ ಓದಿದ್ರು ಯಾರೂ ಉತ್ತರ ಮಾತ್ರ ಕೊಟ್ಟಿಲ್ಲ. ಕನ್ನಡ ಅಕ್ಷರ ಮಾಲೆಯಲ್ಲಿ ಈ ಮೂರು ಅಕ್ಷರಗಳನ್ನು ತೆಗೆದು ಹಕಿದ್ದರೇನು ?

Free advertising.: If you recognize this font, please try to reply in the same. Use typepad or quillpad for the typing

Disclaimer: I have not seen Kannada text books from long. If they have removed those symbols from alphabet list, I have no questions to ask. I heard they did for a vowel “Ruu”, which was not getting used at all.