ನನ್ನ ಓದುವ ಹುಚ್ಚು

ನಾನೂ high school ಹೋಗಿದ್ದೆ, ಎಲ್ಲರಂತೆ. ಅದೊಂದು ಹಳ್ಳಿ ಬಾಳಿಲ ಎಂದು. ಸಾಮಾನ್ಯ ಜನಾವಾಸದಿಂದ ಸ್ವಲ್ಪ ದೂರ. ಅಲ್ಲಿಂದಲ್ಲೇ ನನ್ನ ಈಗಿನ ಎಲ್ಲಾ ಹುಚ್ಚನ್ನು ಬೆಳೆಸಿಕೊಂಡಿದ್ದು. ಕೈಗೆ ಸಿಕ್ಕ ಪುಟವನ್ನು ಓದುವುದು, ಏನಾದರೂ ಗೀಚುತ್ತಾ ಇರುವುದು etc.etc. ಎಲ್ಲ ಶಿಕ್ಷಕರೂ creativity ( ಸೃಜನ ಶೀಲಾತೆಗೆ ) ಗೆ ತುಂಬಾ ಒತ್ತು ಕೊಡುತಿದ್ದರು.

ನಾನೂ ನನ್ನ ಚೆಡ್ದಿ ದೋಸ್ತು ಮಂಜು ಮತ್ತು ಕೆಲವರು ವಿಪರೀತ ಪ್ರಸಂಗೀಗಳು ( ಇದು ಅಧಿಕ ಪ್ರಸಂಗೀ ಗಿಂತಲೂ ಮೇಲೂ ). ಒಬ್ಬರ ಮೇಲೊಬ್ಬರು ಹಟ ಹಿಡಿದು ಓದುತ್ತಿದೆವು.

Bandaya
Bandaya

ಪಾಟ ಅಲ್ಲ , ಆದೇ ಕೈಗೆ ಸಿಕ್ಕಿದ ಪುಸ್ತಕಗಳು. ಶಲ್ಲ ಗ್ರಂಥಾಲಯದ ಎಲ್ಲ ಒಳ್ಳೇ ಪುಸ್ತಕಗಳು ಮೂರು ವರ್ಷಗಲ್ಲಿ ಓದಿ ಮುಗಿಸಿ ಬಿಟ್ಟಿದ್ದೆವು. ಅದರ ಮೇಲೆ ಶಾಸ್ತ್ರಿಗಳ ಮನೆಗೆ ಹೋಗಿ ಪುಸ್ತಕ ತರುತಿದ್ದೆವು. ಆಗ ಓದಿದ್ದೆ ಕೊನೇ . ಅದರ ನಂತರ ಕನ್ನಡ ಪುಸ್ತಕ ಓದುವ ಅವಕಾಶ್ ಸಿಗಲಿಲ್ಲ. ಅವುಗಳಲ್ಲಿ ಕೆಲವೊಂದು ಇನ್ನೂ ಮನಸಿನಲ್ಲಿ ಉಳಿದಿವೆ ..

ಕೆಲವು ಬರೆದಿದ್ದೇನೆ. ಉಳಿದದ್ದು ನೆನಪಾಗುತಿಲ್ಲ.

ವ್ಯಾಸರಾಯ ಬಲ್ಲಾಳ – ( ಬಂಡಾಯ )
ಎಸ್ ಎಲ್ ಭೈರಪ್ಪ ( ಭಿತ್ತಿ , ಪರ್ವ, ದಾಟು )
ಶಿವರಾಮ ಕಾರಂತ ( ಮರಳಿ ಮಣ್ಣಿಗೆ , ಮೂಕಜ್ಜಿಯ ಕನಸುಗಳು, ಚೋಮನ ದುಡಿ )
ಕುವೆಂಪು ( ಮಲೆಗಳಲ್ಲಿ ಮದುಮಗಳು , ಕಾನುರ ಹೆಗ್ಗಡತಿ )
ಯಶವಂತ ಚಿತ್ತಾಲ ( ಶಿಕಾರಿ , ಪುರುಷೋತ್ತಮ )
ಕೆ ಪಿ ಪೂರ್ಣಚಂದ್ರ ತೇಜಸ್ವಿ ( ಕರ್ವಾಲೋ , ಪರಿಸರದ ಕಥೆ )
ಬಿ ಜಿ ಎಲ್ ಸ್ವಾಮಿ ( ಹಸಿರು ಹೊನ್ನು )
ಯು ಆರ್ ಅನಂತಮೂರ್ತಿ ( ಸಂಸ್ಕ್ರಾರ )
ಗೊರೂರು ರಾಮಸ್ವಾಮಿ ಅಯ್ಯಂಗಾರ್ ( ನಮ್ಮ ಉರಿನ ರಸಿಕರು )
ವೋಲ್ಗಾ ಗಂಗಾ ( ರಾಹುಲ ಸಂಕೃತ್ಯಾಯನ ) – ಅನುವಾದಿತ

15 thoughts on “ನನ್ನ ಓದುವ ಹುಚ್ಚು

  1. Hi,
    I good to see kannada aksharas on internet.
    I was in search of such articles. Can you tell me how to write in kannada fonts. So that it can be viewed both on IE and Firefox.
    Thank you

    Like

  2. Bachodi,

    Nice list….and very refreshing to read the post…it takes you back and I can imagine the days in a village (even though I have never lived in a village…LOL).

    And, in case you have forgotten, one novel which you have to add to the list is Tejaswi’s ‘chidaMbara rahasya’. Simply brilliant !!!

    Like

  3. Thank you decemberstud.

    Yes I have read “chidambara Rahasya” , “Jugari Cross” also. There are several other books I have not added to the list. ( anchu, tanti, vamsh vruksha, nayi neralu of S L Bairappa. minimum of twenty of Karantha).

    But the thing is, neither I maintained a log of them nor I remember the stories or the plot). So I dint feel like writing them here (guilty feeling of not remembering them.

    I was a teen when I read those legends. May be if I read them now, I can make better appreciation

    Like

  4. nimma hesru naanu DS avara blog nalli ivatte nodide, nimma web nick name noDi swalpa kutoohala huTTitu.. amele nimma blog ge bande, ee post noDi tumba santhosh aaythu….
    monne benglooralli book fair ittu, idara bagge odideera ankoteeni… Bellur avara blog nallide nodi.. aadre odi…!

    nimma Oduva hambala nODi bahaLa santhosha aaytu saar! nannadondu namaskaara, devru olledu maadli! keep it going!

    Like

  5. Hi Veena…
    ಧನ್ಯವಾದಗಳು,
    ನೀವು ಹೇಳಿದ ಪುಸ್ತಕ ಪ್ರದರ್ಶನದ ಬಗ್ಗೆ ಓದಿದ್ದೆ . ಕನ್ನಡದಲ್ಲಿ ಏನ post ಆಗುತ್ತೋ ಏಲ್ಲಾ ಓದುವ ಅಭ್ಯಾಸ ಮಾಡಿಕೊಂಡಿದ್ದೇನೆ , through syndicate.
    ಬಾಚೋಡಿ unique ಒಂದು ಹೆಸರು, bloggerಗೆ unique URL, avtar ತಾನೇ ಬೇಕಾಗಿದ್ದು ? ನನ್ನ sir-name ಗಿಂತ ಇದೇ ಇಶ್ಟ ನನಗೆ. ಅರ್ಠ ಕೇಳಬೇಡಿ, ಮನೆತನದ ಹೇಸರು.

    Like

  6. ನಮಸ್ಕಾರ. ಅಂತರ್ಜಾಲದಲ್ಲಿ ಕನ್ನಡ ನೋಡೋದು ಬಹಳ ಖುಷಿಯಾಗುತ್ತೆ. ನಿಮ್ಮ ಪುಸ್ತಕದ ನೋಡಿ ಸಹ ಬಹಳ ಖುಷಿ ಆಯ್ತು. ಈಗಲೂ ಇದನ್ನೆಲ್ಲ ಓದುವವರು ಇದ್ದಾರಲ್ಲ ಅಂತ ನಾನೂ ಅಲ್ಪ ಸ್ವಲ್ಪ ಓದಿದ್ದೀನಿ ಇದರಲ್ಲಿ. ಈಗಷ್ಟೇ ಡಿ ವಿ ಜಿ ಯವರ ಕಗ್ಗ ತಾತ್ಪರ್ಯಾ ಓದಲು ಶುರು ಮಾಡಿದ್ದೀನಿ. ಸಿಕ್ಕರೆ ಓದಿ. ನಿಮ್ಮ ಬ್ಲೋಗ್ ಓದಿ ಬಹಳ ಸಂತೋಷ ಆಯ್ತು. ಬರೀತ ಇರಿ. ಹಾಗೆ ನಿಮ್ಮ ಮನೆತನದ ಹೆಸರು ಬಹಳ ವಿಶಿಷ್ಟವಾಗಿದೆ. ಇದು ಒಂದು ಊರಿನ ಹೆಸರು ಅಲ್ಲವ?

    ಹಾಗೆ ಸಂಸ್ಕೃತದಲ್ಲಿ ಇನ್ನೂ ಆಸಕ್ತಿ ಇರೋದರ ಬಗ್ಗೆ ಓದಿ ಬಹಳಾನೇ ಖುಷಿ ಆಯ್ತು. ನನಗೂ ಸಹ ಸ್ವಲ್ಪ ಆಸಕ್ತಿ ಇದೆ. ಆದಾಗ ಸ್ವಲ್ಪ ಓದಲು ಪ್ರಯತ್ನಿಸುತ್ತೇನೆ.

    Like

  7. ನಮಸ್ತೆ ರಮ್ಯಾ ಜಿ,
    ಈಗಲೂ !!? ಇಲ್ಲ… ಇದೆಲ್ಲ ನಾನು ಬಾಲ್ಯದಲ್ಲಿ ಓದಿದ್ದು. ನಾವೆಲ್ಲ ಸೇರಿ ಇದನ್ನು out of Fashion ಮಾಡಿದ್ದೀವಲ್ಲ. ಈಗ ಏನಿದ್ರೂ sydney sheldon ಜಮಾನ. ಡಿ ವಿ ಜಿ ಅವರ “ಕಗ್ಗ ತಾತ್ಪರ್ಯ” ? ಕವನಗಳೇನು ? ಇಲ್ಲ ಓದಿಲ್ಲ ., ಸಿಕ್ಕಿದರೆ ಖಂಡಿತ ಓದಬೇಕು, ಆದರೆ ಸಿಗುವುದೇ ಕಷ್ಟ.
    bachodi ಎನ್ನುವುದು ಮನೆ ಹೆಸ್ರು, ಊರಲ್ಲ. different ಆಗಿದೆಯಲ್ಲ ?

    ಈಗೀಗ ( ಅಲ್ಪ ಸೊಲ್ಪಾ ಗೊತ್ತಿದ್ದ) ಸಂಸ್ಕೃತವನ್ನೂ ಮರೆಯುತ್ತಾ ಇದ್ದಿನೇ. ಬೇಕಾದಷ್ಟು online ಪುಟಗಳಿವೆ …. ಪುನ: pick-up ಮಾಡ್ಬೇಕು.

    Like

  8. ನಮಸ್ಕಾರ ಬಾಚೋಡೀಯವರಿಗೆ. ನೀವು ಹೇಳಿದ್ದು ಸರಿ.. ಈಗ ಕನ್ನಡ, ಕನ್ನಡ ಪುಸ್ತಕ ಎಲ್ಲ “ಔಟ್ ಓಫ್ ಫ್ಯಾಶನ್” ಅಂತ ಮಾಡಿಬಿಟ್ಟಿದ್ದೇವೆ. ಆದರೆ ಆಗಾಗ ಇಂಥ ಓದುಗರನ್ನ ಅದರಲ್ಲೂ ಈ ಭಾರಿ ಪುಸ್ತಕಗಳನ್ನ ಓದುವವರು ಇನ್ನೊ ಇದ್ದಾರೆ ಅಂತ ತಿಳಿದು ಖುಷಿ ಆಗುತ್ತೆ. ನಾನು ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುವುದು. ಇಲ್ಲಂತೂ ಕನ್ನಡಾನೆ ಔಟ್ ಓಫ್ ಫ್ಯಾಶನ್. ಮಾತನಾಡುವುದೆಲ್ಲ ಬಾರಿ ಅಯ್ನ್ ರಾಂಡ್, ಶೆಲ್ಡನ್ ಅವರಗಳ ಬಗ್ಗೆನೇ. ನಾನೂ ಇವುಗಳನ್ನೆಲ್ಲ ಓದುತ್ತೇನೆ ಆದರೆ ಕನ್ನಡದ ಹಳೆ ಪುಸ್ತಕಗಳನ್ನು ಓದುವುದು ಏನೋ ಒಂದು ತರಹ ಖುಷಿ ಅನುಭವ.
    ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗಗಳ ಅರ್ಥ ತಾತ್ಪರ್ಯಾ ಸಮೇತ ಒಂದು ಪುಸ್ತಕ ಇದೆ. ಶ್ರೀಕಾಂತ ಅನ್ನುವವರು ಬರೆದಿರುವುದು. ಅದರಲ್ಲಿ ಕಗ್ಗಗಳೂ, ಅದರ ಅರ್ಥ ನೂ ಇದೆ. ಪುಸ್ತಕ ಸಿಗುವುದು ಕಷ್ಟ ಏನು ಆಗಲ್ಲ. ನಿಮಗೆ ಬೇಕಾದರೆ ಹೇಳಿ ವಿಳಾಸ ತಿಳಿಸುತ್ತೇನೆ. ಅದರ ಒಂದು Audio CD ಕೂಡ ಬಿಡುಗಡೆ ಆಗಿದೆ

    Like

  9. ಹೌದಾ.. ನಾನೂ techie..ನೇ ನಿಮ್ಮ ತರಹ.
    sydney sheldon ಏನೋ ಪರವಾಗಿಲ್ಲ. ಯಾವಾಗ್ಲೋ ಒಮ್ಮೆ ಓದಿದ್ದೆ. time pass ಚೆನ್ನಾಗಿ ಮಾಡ್ಸುತ್ತೆ. ಯಂಡಮೂರಿ, ಮಲ್ಲಾಡಿ ಅವರ ಅನುವಾದಗಳೂ ಇದೇ ರೀತಿ .. “ಒಂದು_ಸಲ_ಓದಿ ಮರೆತು_ಬಿಡಿ” ಪುಸ್ತಕಗಳು.

    ಆದ್ರೆ Ayan rand…!!!??? ನಿಮ್ಗೆ ತುಂಬಾನೆ ಸಹನೆ ಇದೇ ಅನುಸುತ್ತೆ..!!! Fountainhead ಓದಿ ತಲೆ ಗಿಲೆ ಎಲ್ಲ ಕೆಟ್ಟು ಹೋಗಿತ್ತು. ( ಸರಿ, ಒಂದು ದಿನ blog ಲ್ಲಿ review ಬರೀಬೇಕು.)
    ಸಧ್ಯಕ್ಕೆ “ಬಂಡಾಯ”, “ಲಜ್ಜಾ ” ಓದುತ್ತಾ ಇದ್ದೇನೆ. next time ಬೆಂಗ್ಳೂರು ಬಂದಾಗ ಒಂದೆರಡು ಪುಸ್ತಕ ಎತ್ಕೋಬೇಕು…

    Like

Leave a reply to badari Cancel reply