ನನ್ನ ಓದುವ ಹುಚ್ಚು


ನಾನೂ high school ಹೋಗಿದ್ದೆ, ಎಲ್ಲರಂತೆ. ಅದೊಂದು ಹಳ್ಳಿ ಬಾಳಿಲ ಎಂದು. ಸಾಮಾನ್ಯ ಜನಾವಾಸದಿಂದ ಸ್ವಲ್ಪ ದೂರ. ಅಲ್ಲಿಂದಲ್ಲೇ ನನ್ನ ಈಗಿನ ಎಲ್ಲಾ ಹುಚ್ಚನ್ನು ಬೆಳೆಸಿಕೊಂಡಿದ್ದು. ಕೈಗೆ ಸಿಕ್ಕ ಪುಟವನ್ನು ಓದುವುದು, ಏನಾದರೂ ಗೀಚುತ್ತಾ ಇರುವುದು etc.etc. ಎಲ್ಲ ಶಿಕ್ಷಕರೂ creativity ( ಸೃಜನ ಶೀಲಾತೆಗೆ ) ಗೆ ತುಂಬಾ ಒತ್ತು ಕೊಡುತಿದ್ದರು.

ನಾನೂ ನನ್ನ ಚೆಡ್ದಿ ದೋಸ್ತು ಮಂಜು ಮತ್ತು ಕೆಲವರು ವಿಪರೀತ ಪ್ರಸಂಗೀಗಳು ( ಇದು ಅಧಿಕ ಪ್ರಸಂಗೀ ಗಿಂತಲೂ ಮೇಲೂ ). ಒಬ್ಬರ ಮೇಲೊಬ್ಬರು ಹಟ ಹಿಡಿದು ಓದುತ್ತಿದೆವು.

Bandaya
Bandaya

ಪಾಟ ಅಲ್ಲ , ಆದೇ ಕೈಗೆ ಸಿಕ್ಕಿದ ಪುಸ್ತಕಗಳು. ಶಲ್ಲ ಗ್ರಂಥಾಲಯದ ಎಲ್ಲ ಒಳ್ಳೇ ಪುಸ್ತಕಗಳು ಮೂರು ವರ್ಷಗಲ್ಲಿ ಓದಿ ಮುಗಿಸಿ ಬಿಟ್ಟಿದ್ದೆವು. ಅದರ ಮೇಲೆ ಶಾಸ್ತ್ರಿಗಳ ಮನೆಗೆ ಹೋಗಿ ಪುಸ್ತಕ ತರುತಿದ್ದೆವು. ಆಗ ಓದಿದ್ದೆ ಕೊನೇ . ಅದರ ನಂತರ ಕನ್ನಡ ಪುಸ್ತಕ ಓದುವ ಅವಕಾಶ್ ಸಿಗಲಿಲ್ಲ. ಅವುಗಳಲ್ಲಿ ಕೆಲವೊಂದು ಇನ್ನೂ ಮನಸಿನಲ್ಲಿ ಉಳಿದಿವೆ ..

ಕೆಲವು ಬರೆದಿದ್ದೇನೆ. ಉಳಿದದ್ದು ನೆನಪಾಗುತಿಲ್ಲ.

ವ್ಯಾಸರಾಯ ಬಲ್ಲಾಳ – ( ಬಂಡಾಯ )
ಎಸ್ ಎಲ್ ಭೈರಪ್ಪ ( ಭಿತ್ತಿ , ಪರ್ವ, ದಾಟು )
ಶಿವರಾಮ ಕಾರಂತ ( ಮರಳಿ ಮಣ್ಣಿಗೆ , ಮೂಕಜ್ಜಿಯ ಕನಸುಗಳು, ಚೋಮನ ದುಡಿ )
ಕುವೆಂಪು ( ಮಲೆಗಳಲ್ಲಿ ಮದುಮಗಳು , ಕಾನುರ ಹೆಗ್ಗಡತಿ )
ಯಶವಂತ ಚಿತ್ತಾಲ ( ಶಿಕಾರಿ , ಪುರುಷೋತ್ತಮ )
ಕೆ ಪಿ ಪೂರ್ಣಚಂದ್ರ ತೇಜಸ್ವಿ ( ಕರ್ವಾಲೋ , ಪರಿಸರದ ಕಥೆ )
ಬಿ ಜಿ ಎಲ್ ಸ್ವಾಮಿ ( ಹಸಿರು ಹೊನ್ನು )
ಯು ಆರ್ ಅನಂತಮೂರ್ತಿ ( ಸಂಸ್ಕ್ರಾರ )
ಗೊರೂರು ರಾಮಸ್ವಾಮಿ ಅಯ್ಯಂಗಾರ್ ( ನಮ್ಮ ಉರಿನ ರಸಿಕರು )
ವೋಲ್ಗಾ ಗಂಗಾ ( ರಾಹುಲ ಸಂಕೃತ್ಯಾಯನ ) – ಅನುವಾದಿತ