ನಮಸ್ಕಾರ
ಇನ್ನೊಬ್ಬ ಕನ್ನಡಿಗ blogosphear ನಲ್ಲಿ. ಕನ್ನಡದಲ್ಲಿ ಬರೆಯಬೇಕೆಂದು ಎಲಾ circus ಮಾಡಿ , ಕೊನೆಗೆ ಈ ಲಿಂಕ್ ಸಿಕ್ತು. ಇದು ಸರಿಯಾಗಿ unicode follow ಮಾಡದಿದ್ರೂ ಬರೆಯುವುದು ಸೊಲ್ಪಾ ಸುಲಭ ( ಬರಹ software ಗೆ compare ಮಾಡಿದೆರೆ ). ತೊಂದರೆ ಈನೆಂದರೆ ಸರಿಯಾದ ಶಬ್ದ , ವಾಕ್ಯ ಬರೆಯಬೇಕಾದರೆ preview window ನೋಡದೇ ಬರೆಯುವುದು ಸಾಧ್ಯವೇ ಇಲ್ಲ. “ಬರಹ” ದಲ್ಲಿ ಹಾಗೇನಿಲ್ಲ. ಪ್ರತಿಯೊಂದು ಕನ್ನಡ ಅಕ್ಷರಗಳಿಗೆ ಒಂದೊಂದು combination of keys, ನೋಡಿದರೆ ಕನ್ನಡ unicode ಗೆ ತುಂಬಾ ಹತ್ತಿರ.
ಅದೆಲ್ಲ ಬಿಡಿ . ನನ್ನ ಹೆಸ್ರು ಬಾಚ್ ಅಂತ college ನಲ್ಲಿ ನನ್ನ ಗೆಳೆಯರು ಕೊಟ್ಟ ಹೆಸರದು. ಬಾಲ್ಯದಿಂದ ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಓದಿದ್ರೂ ಕನ್ನಡದಲ್ಲಿ ಬರೆಯುವ ಪ್ರಮೇಯ ಅದರ ನಂತರ ಬಂದಿರಲಿಲ್ಲ. ಓದುವುದಂತೂ ಬಿಡಿ, high school ತನಕ ಏನು ಕಾರಂತ , ತೇಜಸ್ವಿ ಭೈರಪ್ಪ ಅಂತ ಓಡಿದ್ನೋ ಅದೇ ಲಾಭ. ಸಮಯ ಎಲ್ಲಿದೆ ಸ್ವಾಮಿ ? ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಾತನಾಡಲೂ ಯಾರು ಸಿಕ್ತ ಇಲ್ಲ. ಬೆಂಗಳೂರಿಗೆ ಯಾವಾಗಲೋ ಬಂದಾಗ ಅಂಗಡಿಯಲ್ಲಿ ” ಎಷ್ಟು ” ಅಂತ ಕೇಳೋ ಬದಲು ” ಎವಳ” ಅಂತ ಕೇಳ್ತೀನಿ. ಇಂತಹುದೆ ಕಾರಣಗಳಿಗೆ ಇಷ್ಟೊಂದು ಕೆಟ್ಟ ವ್ಯಾಕರಣ , ಇಷ್ಟೊಂದು ಆಂಗ್ಲ ಶಬ್ದಗಳು ಪ್ರತಿಯೊಂದು ವ್ಯಾಕ್ಯದಲ್ಲಿ.
ಯಾರಾದ್ರೂ ಕನ್ನದಲ್ಲಿ ಓದಬಲ್ಲವರು ಈ ಪುಟಕ್ಕೆ ಬಂದರೆ , ದಯವಿಟ್ಟು ಒಂದು ನಮಸ್ಕಾರ ಹಾಕಿ ( ಕೆಳಗೆ comment ನಲ್ಲಿ ) . ಅಕ್ಕ ಪಕ್ಕದಲ್ಲಿ ಯಾರು ಇಲ್ಲದಿದ್ದರೂ , virtual ಪ್ರಪಂಚದಲ್ಲಿ ಕನ್ನಡ ಗೆಳೆಯರಿದ್ದಾರೆ ಎಂದು ಹೇಳಿಕೊಳ್ಳಬಹುದಲ್ಲ…. !!!