ಕನ್ನಡದಲ್ಲಿ ಬ್ಲಾಗಿಸೋಣ ಅಂದ್ರೆ…


`ಕನ್ನಡದಲ್ಲಿ ಬ್ಲಾಗು ಮಾಡೋದು ತುಂಬಾ ಕಷ್ಟ, ಒಂದು post ಮಾಡ್ಬೇಕಿದ್ರೊ comment ಬರೀಬೇಕಿದ್ರೊ ಬರೆದು ಅಳಿಸಿ ಬರೆದು ಅಳಿಸಿ ಬಟ್ಟೆ ಹರ್ಕೊಂಡು ಒದ್ದಾಡಿದ್ರೂ ಅಲ್ಲೊಂದು ಇಲ್ಲೊಂದು ಕೀಗುಣಿತ. ಸರಿಯಾಗಿ translitration ಮಾಡುವ ಸರ್ವೀಸೇ ಬಂದಿಲ್ಲ. ಈಗಿರುವ ಸರ್ವೀಸುಗಳು ಚೆನ್ನಾಗಿ ಅನುವಾದನೇ ಮಾಡೋದಿಲ್ಲ. “ಬರಹ” ಎನೊ ಚನ್ನಾಗಿದೆ ಆದ್ರೇ ನಾವೀಗ web2.0 ನಲ್ಲಿದ್ದಿವಿ ತಾನೇ , install ಮಡೊದು ಹಳೆ ಜಮಾನ, ಈಗೇಲ್ಲಾ writing, reading, bookmarking, sharing ಎಲ್ಲಾನೂ on-line . ಮನೆಲೇನೋ ಸರಿ ಆದೆ officeನಲ್ಲಿ install ಮಾಡ್ಬೇಕು ಅಂತ ಕೂತ್ರೇ ನೇರವಾಗಿ ಮನೆಗೆ ಕಳಿಸ್ತಾರೆ. ಮತ್ತು ಏನೇನೋ ಸಮಸ್ಯೇಗಳು. ಕೆಲವು ಪುಟಗಳಲ್ಲಿ font ಓದಕ್ಕೇ ಆಗದಿದ್ದ್ರೇ , ಕೆಲವು URL ಓದಕ್ಕೇ ಅಗೋದಿಲ್ಲ bookmark ಮಾಡೋಣ ಅಂದ್ರೆ .

ಅಮೇರಿಕಾದ ಗೆಳೆಯನೊಬ್ಬ ಭಾರತೀಯ ಭಾಷೆಗಳ web2.0 site ಶುರು ಮಾಡ್ತೀನಿ ಅಂದಿದ್ದ. ಅಲ್ಲೇ ಬರೆದು, save ಮಾಡಿ , ಅಲ್ಲಿಂದಲೇ ಬ್ಲಾಗಿಗೆ ಕಳಿಸೊದು , posting ಏಶ್ಟು ಚೆನ್ನಾಗಿರೋತ್ತೆ ಅಲ್ವಾ. ನೋಡ್ಬೇಕು ಹೇಗಿರುತ್ತೆ ಅಂತ.

“ಭಾಷೆ” ಮತ್ತೊಂದು ವಿಷಯ. ಬ್ಲಾಗು ಅಂದ್ರೆ ತುಂಬಾ casual ಆಗಿ ಬರೀಬೇಕು, ಇದು ದಿನಪತ್ರಿಕೆ ಅಲ್ಲ ನೋಡಿ. ಆದ್ರೇ ಕನ್ನಡ ಭಾಷೆಯೇ ಹಾಗೆ, ಬರೆಯೋಕೇ ಒಂದು, ಮಾತಾಡೋಕೇ ಸಾವಿರ ಡಯಲೇಕ್ಟುಗಳು. ಸೀರಿಯಸ್ಸಾಗಿ ಬರೆದ್ರೇ ತುಂಬಾ ಬೋರು , casualಲಾಗಿ ಬರೆದ್ರೇ ತುಂಬಾ ವಿಚಿತ್ರ. ಒಂದು ವಾಕ್ಯ ನೋಡಿ ” ಎಷ್ಟು ಸುಂದರ ಹುಡುಗಿ ಹೋಗ್ತಾ ಇದ್ದಾಳೆ ನೋಡಿ” ಎನ್ನುವುದನ್ನೇ ” ನೋಡ್ಲಾ ಮಗಾ.. ಎಂತಾ figure ಹೋಗ್ತವ್ಳೇ…” ಇಲ್ಲಾ “ನೋಡಿ ಮಾರಾಯರೇ , ಎಂತಾ ಚೆಂದವಾದ ಹೆಣ್ಣು ಹೋಗುತ್ತಾ ಇದ್ದಾಳೆ”.

ಮತ್ತೊಂದು ಸಮಸ್ಯೆ ದಿನಬಳಕೆಯ ಅರ್ಧಕ್ಕರ್ಧ ಶಬ್ದಗಳು ಕನ್ನಡದಲ್ಲಿಲ್ಲ, ಇಂಗ್ಲಿಶ ನುಗ್ಗಿಸಿ ಬರೀಬೇಕು. “ಬರಹವೆಂಬ ತಂತ್ರಾಂಶವನ್ನು ನಿಮ್ಮ ಗಣಕಯಂತ್ರದಲ್ಲಿ ಪ್ರತಿಷ್ಟಾಪಿಸಿ” ತುಂಬಾ ವಿಚಿತ್ರವಾಗಿರುತ್ತೆ ಅಲ್ವಾ. ತುಂಬಾ ಆಂಗ್ಲ ಪದಗಳು ಬಂದರೊ ಬೇಜಾರು. ಕಡಿಮೆ ಬರೆದ್ರೆ ಏನು ಬರ್ದಿದ್ದಾನೇಂತ ಅರ್ಥವಾಗಲ್ಲ.

ಸಧ್ಯಕ್ಕೇ ಒಂದು ಬ್ಲಾಗು ನೋಡ್ದೆ. “ಬೊಗಳೆ ರಗಳೆ” ಅಂತ (ಬ್ಲಾಗಳೆ ರಗಳೆ ಇರ್ಬೇಕು ). ಒಂದು ಅದ್ಭುತವಾದ blogroll maintain ಮಾದಿದ್ದಾರೆ. ಏಲ್ಲರನ್ನೊ subscribe ಮಾಡಿಕೊಂಡ್ಬಿಟ್ಟೇ. ಪುಸ್ತಕ ಓದುವುದಂತೂ ಹಣೆಬರಹದಲ್ಲಿ ಬರೆದಿಲ್ಲ, ಬ್ಲಾಗಾದ್ರೂ ಓದೋಣ.

ಯಾರಾದ್ರೂ “ಬ್ಲಾಗು” ಶಬ್ದಕ್ಕೇ ಓಂದು ಕನ್ನಡ ಹೆಸರು ಹುಡುಕೀಪ್ಪಾ. ಕಟ್ಟೆ ಪುರಾಣಾನೊ, ಹರಟೆನೋ ಏನಾದ್ರೂ ಸರಿ. ಈ ಬ್ಲಾಗ್ನ “ಬ್ಲಾಗು” ಅಂತ ಬರೇಯುವುದೋ “ಬ್ಲೋಗು” ಅಂತ ಬರೇಯುವುದೋ ಎಂಬುದೇ ಓಂದು ತಲೆಬಿಸಿ.

ಕನ್ನಡಿಗರೇ ನಮಸ್ಕಾರ !!


ನಮಸ್ಕಾರ
ಇನ್ನೊಬ್ಬ ಕನ್ನಡಿಗ blogosphear ನಲ್ಲಿ. ಕನ್ನಡದಲ್ಲಿ ಬರೆಯಬೇಕೆಂದು ಎಲಾ circus ಮಾಡಿ , ಕೊನೆಗೆ ಲಿಂಕ್ ಸಿಕ್ತು. ಇದು ಸರಿಯಾಗಿ unicode follow ಮಾಡದಿದ್ರೂ ಬರೆಯುವುದು ಸೊಲ್ಪಾ ಸುಲಭ ( ಬರಹ software ಗೆ compare ಮಾಡಿದೆರೆ ). ತೊಂದರೆ ಈನೆಂದರೆ ಸರಿಯಾದ ಶಬ್ದ , ವಾಕ್ಯ ಬರೆಯಬೇಕಾದರೆ preview window ನೋಡದೇ ಬರೆಯುವುದು ಸಾಧ್ಯವೇ ಇಲ್ಲ. “ಬರಹ” ದಲ್ಲಿ ಹಾಗೇನಿಲ್ಲ. ಪ್ರತಿಯೊಂದು ಕನ್ನಡ ಅಕ್ಷರಗಳಿಗೆ ಒಂದೊಂದು combination of keys, ನೋಡಿದರೆ ಕನ್ನಡ unicode ಗೆ ತುಂಬಾ ಹತ್ತಿರ.

ಅದೆಲ್ಲ ಬಿಡಿ . ನನ್ನ ಹೆಸ್ರು ಬಾಚ್ ಅಂತ college ನಲ್ಲಿ ನನ್ನ ಗೆಳೆಯರು ಕೊಟ್ಟ ಹೆಸರದು. ಬಾಲ್ಯದಿಂದ ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಓದಿದ್ರೂ ಕನ್ನಡದಲ್ಲಿ ಬರೆಯುವ ಪ್ರಮೇಯ ಅದರ ನಂತರ ಬಂದಿರಲಿಲ್ಲ. ಓದುವುದಂತೂ ಬಿಡಿ, high school ತನಕ ಏನು ಕಾರಂತ , ತೇಜಸ್ವಿ ಭೈರಪ್ಪ ಅಂತ ಓಡಿದ್ನೋ ಅದೇ ಲಾಭ. ಸಮಯ ಎಲ್ಲಿದೆ ಸ್ವಾಮಿ ? ಕಳೆದ ಮೂರು ವರ್ಷಗಳಿಂದ ಸರಿಯಾಗಿ ಮಾತನಾಡಲೂ ಯಾರು ಸಿಕ್ತ ಇಲ್ಲ. ಬೆಂಗಳೂರಿಗೆ ಯಾವಾಗಲೋ ಬಂದಾಗ ಅಂಗಡಿಯಲ್ಲಿ ಎಷ್ಟು ಅಂತ ಕೇಳೋ ಬದಲು ” ಎವಳ” ಅಂತ ಕೇಳ್ತೀನಿ. ಇಂತಹುದೆ ಕಾರಣಗಳಿಗೆ ಇಷ್ಟೊಂದು ಕೆಟ್ಟ ವ್ಯಾಕರಣ , ಇಷ್ಟೊಂದು ಆಂಗ್ಲ ಶಬ್ದಗಳು ಪ್ರತಿಯೊಂದು ವ್ಯಾಕ್ಯದಲ್ಲಿ.

ಯಾರಾದ್ರೂ ಕನ್ನದಲ್ಲಿ ಓದಬಲ್ಲವರು ಪುಟಕ್ಕೆ ಬಂದರೆ , ದಯವಿಟ್ಟು ಒಂದು ನಮಸ್ಕಾರ ಹಾಕಿ ( ಕೆಳಗೆ comment ನಲ್ಲಿ ) . ಅಕ್ಕ ಪಕ್ಕದಲ್ಲಿ ಯಾರು ಇಲ್ಲದಿದ್ದರೂ , virtual ಪ್ರಪಂಚದಲ್ಲಿ ಕನ್ನಡ ಗೆಳೆಯರಿದ್ದಾರೆ ಎಂದು ಹೇಳಿಕೊಳ್ಳಬಹುದಲ್ಲ…. !!!