ಹುಚ್ಚು ಮನಸ್ಸಿನ ಹತ್ತು confusion..!!

ನಮಸ್ಕಾರ,

ತುಂಬಾ ದಿನದಿಂದ ಬ್ಲಾಗಲ್ಲಿ ಏನು ಬರೀಬೆಕೂಂತ ಹೊಳಿತ ಇರಲಿಲ್ಲ. ನಂದೇ ತಾನೇ ಬ್ಲಾಗ್ ಏನದ್ರೂ ಬರೆದು ಎಸೆದುಬಿಡೊಣ ಅಂದುಕೊಂಡ್ರೆ – ಜೊತೆಯಲ್ಲೇ ಇದೆಯಲ್ಲ ಮಹಾಮಾರಿ “ಆಲಸ್ಯ”. ನಾಳೆಯಿಂದ ಹೊಸವರ್ಷ – ನಿನ್ನೆ, ಇವತ್ತು ನಾಳೆನೂ ರಜಾ ಕೊಟ್ಟು ಬಿಟ್ಟಿದ್ದಾರೆ, ಹೈಬರ್ನೆಶನ್ ಮುಗಿಸಿ ಎದ್ದೇಬಿಟ್ಟೆ.

ಆದ್ರೆ ಮೊದಲಿನ ಪ್ರಶ್ನೆ ಅಲ್ಲೇ ಇದೆ – ಬರೆಯುವುದೇನು ? “ಸದ್ದಾಂ ಹುಸೈನ್ ಸ್ವರ್ಗ ತಲುಪಿದ್ದು ಹೀಗೆ” … ಬೇಡ .. ಎಲ್ಲಾ ಪತ್ರಿಕೆಗಳಲ್ಲೂ ಅದೇ ಇದೆ. ಸರಿ..”ದ್ರಾವಿದ್ ಬಳಗದ ಬಟ್ಟೆ ಹರಿದ ಹರಿಣಗಳು”….ಹುಂ…ಆದ್ರೆ ಹೊಸತೇನಿದೆ ಇದರಲ್ಲಿ ? ಭಾರತದ ಕ್ರಿಕೆಟ್ ಭವಿಶ್ಯ ಹೇಳ್ಬೆಕಿದ್ರೆ ನಾಸ್ಟೋಡಾಮಸ್ ಬೇಕಾಗಿಲ್ಲ. ಈ ಸಲ ಮೂವಿ ರಿವ್ಯೂ ( ಪ್ರಿಯಾಜಿ ಯಾವಗ್ಲೂ ಹೇಳ್ತಾ ಇರ್ತಾರೆ..” ಲೋ ಗೂಬೆ, ನಿನ್ ಕೆಲ್ಸ ಬಿಟ್ಟು ಮೂವಿ ರಿವ್ಯೂ ನೇ ಬರಿತಾ ಇರು, ಇದೊಂದೆ ನೀನು ಸರಿಯಾಗಿ ಮಾಡೊದು”) ಬರೆಯೋಣ ಅಂದ್ರೆ ಚೆನ್ನೈ ಯಲ್ಲಿ ಯಾವುದೇ ಮೂವಿನೇ ರಿಲೀಸ್ ಆಗಿಲ್ವಲ್ರಿ, ನನ್ಗರ್ಥವಾಗೊದು…!!

ಸರಿ, ಬ್ಲಾಗ್ ಮರ್ತು ಬಿಟ್ಟು ಸರಿಯಾಗಿ ಸುತ್ತಾಡೊಣ ಅಂದ್ರೆ ಕಾಂಕ್ರೀಟು ಕಾಡು ಬಿಟ್ರೆ ಮತ್ತೇನೂ ಇಲ್ಲ. ಬೀಚ್ಂತೂ ಕುಂಭಮೇಳದ ತರ, ಕಾಲಿಡಲೂ ಜಾಗವಿಲ್ಲ. ದೇವಸ್ತಾನಕ್ಕೆ ಹೋದ್ರೆ ಮನೆಯಿಂದ ಫೋನ್ ಬರುತ್ತೆ ” ಲೊ .. ನಾಸ್ತಿಕ ಪರಮಾತ್ಮಾ… ಅರೋಗ್ಯ ಸರಿಯಿಲ್ವೇನು ?” ಇಲ್ಲಾ ” ಒಂದು ಸುನಾಮಿ ಸಾಕಾಗಿಲ್ವಾ…”.

ಈ ತರ.. ಒಂದು ರಜೆ ಸಿಕ್ಕಿದ್ರೆ , ತಲೆಯೆಲ್ಲಾ ಕೆಟ್ಠೊಗುತ್ತೆ. ( ರಜೆ ಸಿಕ್ಕಿಲ್ಲಾದ್ರೆ .. ಅದೂ ಒಂದು ಗೋಳು. ) .

ಪುನ: ಹೈಬರ್ನೇಶನ್ ಹೊಗ್ತಾ ಇದ್ದಿನಿ…

ಸುತ್ತಾಡೊರು ಸುತ್ತಾಡಿ…. ಓದೋರು ಓದಿ.. ಏಣ್ಣೆ ಹೊಡಿಯೋರು ಹೊಡೀರಿ.. ಡಿಸ್ಟರ್ಬ್ ಮಾತ್ರಾ ಮಾಡ್ಬೇಡಿ..

ನಿಮಗೆಲ್ಲಾ.. ಹೊಸವರ್ಷದ ಶುಭಾಶಯಗಳು….!

Update:

For Tarang’s wish, post is translated to english. Title is: “Ten confusions of a mad mind”.

Hi, I was wondering what to write next in my blog, since a while. Thought I will post some scribbles of mine, any way I own it… Don’t I? No office and work, they gave three days are there to sleep. Along comes laziness. Anyways, just finished my hibernation…

There comes the first questions what to write? “Suddam Husain reaches heaven …” nope… its there in all feeds …!!! “South Africans strip Dravid’s gang…”… Hmm… No again. There is nothing new in it. You don’t need to be Nostradamus to predict India to lose a game.

OK let’s write a movie review. (Priya keep telling me “abe ullu ke patte… Quit your company and keep writing movie reviews. That’s only thing in this world you do correctly). But, No movies gets released in Chennai which I can understand.

Alright, chuck it…!! Let’s rock the city. Oops, but… There’s no place I can find a place to sit calmly in Chennai. Beaches are like “Kumbh mela”.., the things left here are temples… but if I go, my mom will be shocked. Last time she predicted one more Tsunami when I did it. This is the way I spend my weekends. There always will be a complaint, If I have a long leave (and also if I do get it)

Going for hibernation again….Those who want to roam around “best of luck “. Those who want to read… do it., those who planned to booz… yenjoy..Hiak..! But don’t disturb please

And to all happy new year….!!

4 thoughts on “ಹುಚ್ಚು ಮನಸ್ಸಿನ ಹತ್ತು confusion..!!

 1. ಸಕ್ಕತ್ತಾಗಿತ್ತು ಬರಹ ಮತ್ತು ಚಿತ್ರ.! ನಕ್ಕಿ ನಕ್ಕಿ ಸುಸ್ತು…! 🙂
  ಹೊಸ ವರ್ಷ ಆಗಿ ಒನ್ದು ದಿನ ಆಗೆ ಹೊಯ್ತು, ಈಗ ನಿಮಗೆ ಶುಭಾಶಯಗಳನ್ನ ಹೇಳ್ತಾ ಇದೀನಿ.
  ಸದ್ದಾಮ್ ಸ್ವರ್ಗಗ್ಗೆ ಲಗ್ಗೆ ಅನ್ಥೆ, ಅವತ್ತು ವೈಕುಂಠ ಎಕಾದಶಿ ಅಂತೆ, ಸ್ವರ್ಗದ ಬಾಗಿಲು ತೆರ್ದಿದ್ದಂತೆ.

  Like

 2. @ Tarang.
  Post has been updated with a translation.

  @ Veenaji
  ಧನ್ಯವಾದಗಳು , ನಿಮಗೂ ಹೊಸ ವರ್ಷದ ಶುಭಾಶಯಗಳು.
  hmm… ಸದ್ದಾಮ್ ವಿಷ್ಯ…
  ಈ ದೇವರುಗಳೂ ತಪ್ಪು ಕೆಲ್ಸಾ ಮಾಡ್ತಾರಪ್ಪ..!!! ಯಾರು ಒಳಗೆ ಬರ್ತಾರಂತ ನೋಡ್ಕೊಂಡು ಬಾಗಿಲು ತೆರೀಬೇಕಲ್ವಾ

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s